ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು... ಪದಗಳಿಗೆ,
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು... ಹಾಡಿನ ಸಾಲುಗಳಿಗೆ,
ಜೈ ಕರ್ನಾಟಕ ಮಾತೆ ಎಂದು ಲೌಡ್ ಸ್ಪೀಕರ್ ನಿಂದ ಬರ್ತಿರೋ ಧ್ವನಿಗಳಿಗೆ
ನಮ್ಮೂರಲ್ಲಿ ಜನ ಹೆಚ್ಚಿನ ಪ್ರೀತಿ ತೋರಿಸೋದೊಂದು ದಿನ ಅಂದ್ರೆ ನವೆಂಬರ್ ಒಂದು.
ಈ ದಿನ ನಿಮ್ಮ ಜೀವನದಲ್ಲಿ ಮುಂಚೆ ಯಾವಾಗಲೋ ಬಂದು ಹೋಗಿದೆ , ಮತ್ತದೇ ದಿನ ನ ನಾನು ಕಳಿತಿದಿನಿ ಅಂತ ಅನ್ನಿಸ್ತಿದ್ರೆ ಅದು ನಿಮ್ಮ ತಪ್ಪಲ್ಲ ಬಿಡಿ. ಬೆಳಗಾದ ತಕ್ಷಣ ಟಿವಿ ಲಿ ಹೋದ ವರ್ಷ ಕೇಳಿದ ಅದೇ ಗೀತೆಗಳು, ಜನರು ರಾಜ್ಯೋತ್ಸವ ಆಚರ್ಸುತ್ತಿರೋ ವರದಿಗಳು, "ನಾವು ಬರಿ ಒಂದು ದಿನ ಅಷ್ಟೇ ಅಲ್ಲ ವರ್ಷದ ಪ್ರತಿ ದಿನ ಆಚರಿಸಬೇಕು " ಅಂತ ಸಂದರ್ಶನ ದಲ್ಲಿ ಹೇಳ್ತಿರೋ ಕವಿಗಳು, ಇವೆಲ್ಲ ನೋಡಿ ನಿಮ್ಮಲ್ಲಿ ಕೆಲವರ ಧ್ಯಾನ ಟಿವಿಯ ಕಡೆಯಿಂದ ಅಯ್ಯೋ ಆಗಲೇ ಒಂದು ವರ್ಷ ಇಷ್ಟು ಬೇಗ ಕಳೆದು ಹೋಗಿ ಬಿಟ್ಟಿದೆ ಎಂಬ ಯೋಚನೆಯ ಕಡೆ ಕೆಲ ಕ್ಷಣ ತೆರಳೋದುಂಟು.
ಅದೇನೇ ಇರ್ಲಿ ನಾನು ಕೂಡ ಹೇಳೋದಿಷ್ಟೇ ಅಭಿಮಾನ ಅನ್ನೋದು ದೊಡ್ಡ ಚಂದ್ರ ನ ತರ ಹುಣ್ಣಿಮೆಗೆ ಪ್ರಖರವಾಗಿ , ಆದರೆ ಅಮಾವಾಸ್ಯೆಗೆ ಇಲ್ಲವೆ ಇಲ್ಲ ಅನ್ನೋದಕ್ಕಿಂತ , ಚಿಕ್ಕದಾದರೂ ಸರಿ ಪ್ರತಿನಿತ್ಯ ಬರೋ ನಕ್ಷತ್ರದ ಹಾಗಿರಲಿ.
Nov 1, 2009
Subscribe to:
Posts (Atom)